ಒಂದೆಲಗ ಮಲೆನಾಡಿನ ಕಡೆ ಬೆಳೆಯುವ ಒಂದು ಸಣ್ಣ ಗಿಡ ಅಥವಾ ಬಳ್ಳಿ. ಮಲೆನಾಡಿನ ಜನ ಇದನ್ನ ಆರೋಗ್ಯದ ದೃಷ್ಟಿಯಿಂದಲೂ, ರುಚಿಯ ದೃಷ್ಟಿಯಿಂದಲೂ ಬಳಕೆ ಮಾಡುತ್ತಾರೆ. ಸ್ವಲ್ಪ ಮಳೆಗಾಲದ ಸಮಯದಲ್ಲಿ ಮಾತ್ರ ಹೆಚ್ಚಾಗಿ ಸಿಗುವ ಈ ಗಿಡ, ಸ್ವಲ್ಪ ನೀರು ಸಿಗವ ಜಾಗದಲ್ಲಿ ವರ್ಷ ಪೂರ್ತಿ ಇರುತ್ತದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಸಿಗುವ ಈ ಗಿಡದ ತಂಬಳಿ ರುಚಿ ಮತ್ತು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇನ್ನು ಅನೇಕ ಆರೋಗ್ಯಕರ ವಿಚಾರಗಳು ಇದರಲ್ಲಿ ಇವೆ. ಕೆಲಸದ ನಿಮಿತ್ತ ನಗರಗಳಲ್ಲಿ ವಾಸಿಸುವ ಈಗಿನ ಕಾಲದ ಯುವ ಜನರಿಗೆ ಇದರ ರುಚಿ ಸಿಗುವುದು ಎಲ್ಲೋ ಊರಿಗೆ ಬಂದಾಗ ಒಮ್ಮೆ ಅಥವಾ ಊರಿಂದ ನಗರಕ್ಕೆ ಹೋಗುವ ಸಮಯದಲ್ಲಿ ಜೊತೆಗೆ ಕೊಂಡೊಯ್ದರೆ ಮಾತ್ರ.
ರಾ ಗ್ರಾನ್ಯುಲ್ಸ್ (Raw Granules) ಅಂತ ಒಂದು ಮಲೆನಾಡಿನ ನೈಸರ್ಗಿಕ ಆಹಾರ ಉತ್ಪನ್ನಗಳನ್ನ ಸರಬರಾಜು ಮಾಡುವ ಒಂದು ಉದ್ಯಮ. ಏನಿದು ಒಂದೆಲಗ ಬಿಟ್ಟು ಬೇರೆ ವಿಚಾರ ಅಂತ ಯೋಚನೆ ಮಾಡಿದ್ರೆ, ಹೇಳ್ತಿನಿ ಇರಿ. ಇವರು ಮಲೆನಾಡಿನಲ್ಲಿ ಸಿಗುವ ಎಲ್ಲ ತರಹದ ವಿಶೇಷ ಆಹಾರ ಪದಾರ್ಥಗಳು, ಮಸಾಲೆಗಳು, ಜೇನುತುಪ್ಪ, ಒಣ ಹಣ್ಣುಗಳು, ಹೆಲ್ತ್ ಡ್ರಿಂಕ್'ಗಳನ್ನೂ ಕರ್ನಾಟಕ ಎಲ್ಲ ಕಡೆ ಸರಬರಾಜು ಮಾಡುತ್ತಾರೆ. ಅವರ ಸಂಪರ್ಕ ಮಾಹಿತಿ ಕೊನೆಯಲ್ಲಿ ನಮೂದಿಸಿರುತ್ತೇನೆ.
ಅವರ ಹೆಲ್ತ್ ಡ್ರಿಂಕ್'ಗಳಲ್ಲಿ ಒಂದು ಬ್ರಾಂಹಿ ಹೆಲ್ತ್ ಡ್ರಿಂಕ್. ಅಂದರೆ ಒಂದೆಲಗದ ರಸ. ಅವರು ಹೇಳುವ ಪ್ರಕಾರ ಅದರಲ್ಲಿ ಕೇವಲ ಒಂದೆಲಗದ ರಸ, ಸಕ್ಕರೆ ಮತ್ತು ನಿಂಬೆಯ ರಸ ಮಾತ್ರ ಇದ್ದು, ಯಾವುದೇ ಹಾನಿಕಾರಕ ಬಣ್ಣ ಅಥವಾ ಸಂರಕ್ಷಕಗಳನ್ನೂ ಒಳಗೊಂಡಿರುವುದಿಲ್ಲ. ಆ ಬಾಟಲಿ ಮೇಲೆ ಇರುವ ಪ್ರಕಾರ ಅದು ಒಂದು ಪಾನೀಯದ ಮಿಶ್ರಣ. ಈ ಹೆಲ್ತ್ ಡ್ರಿಂಕ್ ಜೊತೆ ಸ್ವಲ್ಪ ನೀರು, ಸಕ್ಕರೆ ಬೆರೆಸಿದರೆ ಕುಡಿಯುವ ಪಾನಕ ತಯಾರು(ಅದರ ಅಳತೆ ಆ ಬಾಟಲಿ ಮೇಲೆ ಇದೆ). ಆದರೆ ನಾನು ಅದರಲ್ಲಿ ತಂಬಳಿ ಮಾಡೋಣ ಅಂತ ಇವತ್ತು ಪ್ರಯತ್ನಿಸಿದೆ. ಅದು ನನ್ನ ಊಹೆಗೂ ಮೀರಿದ ರುಚಿ ಕೊಟ್ಟಿತ್ತು. ಈಗಷ್ಟೇ ಕಿತ್ತುತಂದ ಒಂದೆಲಗದ ಎಲೆಯಿಂದ ಮಾಡಿದ ತಂಬಳಿ ರುಚಿ ಸಿಕ್ಕಿತು ಮತ್ತು ಮಾಡುವ ವಿಧಾನ ಕೂಟ ತುಂಬ ಸುಲಭ.
ತುರಿದ ಹಸಿ ತಿಂಗಿನ ಕಾಯಿಯ ಜೊತೆ, ಅರ್ಧ ಚಮಚ ಜೀರಿಗೆ, ೩-೪ ಕಾಳು ಮೆಣಸು, ಅರ್ಧ ಚಮಚ ಉಪ್ಪು, ೫-೭ ಚಮಚದಷ್ಟು ಬ್ರಾಂಹಿ ಹೆಲ್ತ್ ಡ್ರಿಂಕ್ ಹಾಕಿ ಚನ್ನಾಗಿ ಬೀಸಿ, ರಸ ತೆಗೆದು, ಅದಕ್ಕೆ ಸ್ವಲ್ಪ ಮಜ್ಜಿಗೆ ಮತ್ತು ೨ ಚಮಚ ಬೆಲ್ಲ ಚನ್ನಾಗಿ ಕದಡಿ , ಮೇಲೆ ಒಂದು ಜೀರಿಗೆ ಒಗ್ಗರಣೆ ಹಾಕಿದರೆ ಮುಗೀತು. ಇದನ್ನ ಅನ್ನದ ಜೊತೆ ಸಾರಿನ ತರಹ ಊಟಕ್ಕೂ ಬಳಸಬಹುದು ಮತ್ತು ಕುಡಿಯಲು ಬಲು ರುಚಿ. ಮಹಾನಗರದಲ್ಲಿ ಇದ್ದು, ಈ ತರಹದ ಮನೆ ಊಟದ ರುಚಿ ಬೇಕು ಅಂದರೆ ಒಮ್ಮೆ ತಪ್ಪದೆ ಪ್ರಯತ್ನಿಸಿ ನೋಡಿ.
ರಾ ಗ್ರಾನುಲ್ಸ್ ಅವರ ಬಳಿ ೩೦ಕ್ಕೂ ಹೆಚ್ಚಿನ ಮಲೆನಾಡ ಉತ್ಪನ್ನಗಳು ಲಭ್ಯವಿದ್ದು, ಆನ್ಲೈನ್ ಮೂಲಕ ಆರ್ಡರ್ ಪಡೆದು, ನಿಮ್ಮ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಮತ್ತು ಸಾಗರ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ನಗರಗದ ಮಳಿಗೆಗಳಲ್ಲಿಅವರ ಉತ್ಪನ್ನಗಳು ಲಭ್ಯವಿರುತ್ತದೆ. ಅವರ website : https://rawgranules.in/