ಇದು ಕೇವಲ ನನ್ನ ಅಭಿಪ್ರಾಯವಾಗಿದ್ದು, ಇದರ ವಾಸ್ತವಿಕತೆ ಅಥವಾ ಬೇರೊಬ್ಬರ ಅಭಿಪ್ರಾಯ ಬೇರ-ಬೇರೆ ಇರಬಹುದು. ಮಾರುಕಟ್ಟೆಯ ಮೇಲೆ/ಬ್ಯಾಂಕ್ ಖಾತೆಯಲ್ಲಿ ಅಥವಾ ಇನ್ನು ಯಾವುದೇ ಮೂಲದಲ್ಲಿ ಹೂಡಿಕೆ ಅರಿತು ಮಾಡುವುದು ಒಳ್ಳೆಯದು.
ಸುಮಾರು ಜನ ಅಥವಾ ಎಲ್ಲಾ ಕಡೆ ಹೇಳುವಂತೆ ಬಂಗಾರದ ಮೇಲೆ ಹೂಡಿಕೆ ಯಾವತ್ತೂ ನಷ್ಟವಾಗುವುದಿಲ್ಲ, ಬಂಗಾರದ ಬೆಲೆ ಅಧಿಕವಾಗುತ್ತಲೇ ಇರುತ್ತದೆ ಆದರೆ ಬಂಗಾರದ ಮೇಲಿನ ಹೂಡಿಕೆ ನಮಗೆ ಅವಶ್ಯಕತೆ ಇದ್ದಾಗ ಹಣವನ್ನು ಕೊಡುತ್ತದೆಯೇ? ಇಲ್ಲವೇ? ಎಂಬುದು ಒಂದು ಪ್ರಶ್ನೆ.
ಯಾಕೆಂದರೆ ನಮ್ಮ ಅನಿವಾರ್ಯ ಸಂಗತಿಗಳಲ್ಲಿ ಉದಾಹರಣೆ ಆಸ್ಪತ್ರೆ ಖರ್ಚು, ಮೂಲ ವಸತಿ ಈ ಸಮಯಗಳಲ್ಲಿ ನಮಗೆ ಹಣದ ಅವಶ್ಯಕತೆ ಇರುತ್ತದೆ. ಆಗ ನಾವು ಕೂಡಿಟ್ಟ ಹಣ/ತಕ್ಷಣ ಸಿಗುವ ಬ್ಯಾಂಕ್ ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿ ಉಪಯೋಗಕ್ಕೆ ಬರುತ್ತದೆ ಬಂಗಾರದ ಮೇಲೆ ಹೂಡಿದರೆ ಫಿಸಿಕಲ್ ಗೋಲ್ಡ್ ಉಪಯೋಗಕ್ಕೆ ಬರುವುದಿಲ್ಲ ನಾವು ಅದನ್ನು ಹಣದ ರೂಪದಲ್ಲಿ ಮಾರ್ಪಡಿಸುವುದು ಅಂದರೆ ಬಂಗಾರ ಮಾರಿ ಹಣವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಇತ್ತೀಚೆಗೆ ನಾನು ಅರಿತುಕೊಂಡಿದ್ದು ಏನೆಂದರೆ, ಬಂಗಾರವನ್ನು ಮಾರುವುದು ಅಷ್ಟು ಸುಲಭದ ಕೆಲಸವಲ್ಲ. ಬಂಗಾರದ ಅಂಗಡಿಯವರು ಅದನ್ನು ಕೊಳ್ಳುವುದಿಲ್ಲ, ಆದರೆ ಅವರು ಹಳೆ ಬಂಗಾರದ ಒಡವೆಗಳ ಬದಲು ಹೊಸ ಮಾದರಿಯ ಒಡವೆಗಳನ್ನು ಕೊಡಲು ತಯಾರಿರುತ್ತಾರೆ ಆದರೆ ಹಣವನ್ನಲ್ಲ. ಬಂಗಾರದ ಬೆಲೆ ರೂಪಾಯಿ.48,000/- 10ಗ್ರಾಂಗೆ ಮುಟ್ಟಿದಾಗ ಸುಮಾರು ಮಾರ್ಚ್ 2022 ಕೊನೆಯ ದಿನಗಳು. ಬಹಳ ಅನಿವಾರ್ಯ ಕಾರಣಗಳಿಂದ ಒಬ್ಬ ವ್ಯಕ್ತಿ 2004ರಲ್ಲಿ ಖರೀದಿಸಿದ್ದ 10 ಗ್ರಾಂ ಬಂಗಾರವನ್ನು (ಸುಮಾರು ಬೆಲೆ ರೂಪಾಯಿ.6,400/-) ಮಾರಲು ಬಂಗಾರದ ಅಂಗಡಿಗಳಿಗೆ ತೆರಳುತ್ತಾರೆ. ಸುಮಾರು ಹತ್ತಾರು ಅಂಗಡಿಗಳನ್ನು ತೋರುಗಿದ ಮೇಲು ಆ ಬಂಗಾರ ಮಾರಲು ಸಾಧ್ಯವಾಗದ ಕಾರಣ ಅದನ್ನು ಗಿರವಿ ಇಡುವುದು ಮತ್ತು ಅದರ ಮೇಲೆ ಬಡ್ಡಿ ಕಟ್ಟುವುದು ಅನಿವಾರ್ಯವಾಗುತ್ತದೆ.
ಇದರಿಂದ ನಾವು ಅರಿತ್ತಿದ್ದು ಏನೆಂದರೆ, ನಮ್ಮ ಉಳಿತಾಯವನ್ನು/ಬಂಡವಾಳನ್ನು ಯಾವುದೇ ಒಂದೇ ಕಡೆ/ ಒಂದೇ ಮೂಲದಲ್ಲಿ ಶೇಖರವಾಗದಂತೆ ನೋಡಿಕೊಳ್ಳಬೇಕು, ಮತ್ತು ಅದರ ಮೌಲ್ಯ ಕಮ್ಮಿ ಆಗದ ಜಗದಲ್ಲಿ ಹೂಡಿಕೆ ಮಾಡಬೇಕು.